ವಿಶ್ವ ಯೋಗ ದಿನ : ಯೋಗ ಮಾಡಿ ಆರೋಗ್ಯ ಪಡೆಯಿರಿ..
ವಿಶ್ವಸಂಸ್ಥೆ ತನ್ನ ೬೯ನೇ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ ೨೧ರ ದಿನಾಂಕವನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವಾಗಿ ಆಚರಿಸುವುದಾಗಿ ಘೋಷಿಸಿದೆ. ಭಾರತದ ಪ್ರಧಾನಿಯವರು ೨೭ ಸೆಪ್ಟೆಂಬರ್, ೨೦೧೪ರಂದು ವಿಶ್ವಸಂಸ್ಥೆಯ ಮಹಾಧಿವೇಶನದ ಸಂದರ್ಭದಲ್ಲಿ ಮಾಡಿದ ಆ ಬಗೆಗಿನ ಪ್ರಸ್ತಾವನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಜಗತ್ತಿನ ೧೭೭ ದೇಶಗಳು ಪ್ರಸ್ತಾಪವನ್ನು ಬೆಂಬಲಿಸಿದವು. ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾದುದಲ್ಲ; ಬದಲಾಗಿ ಅದು ಪೂರ್ಣವಾದ ಜೀವನ ವಿಧಾನ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಅದು ಸಮನ್ವಯವನ್ನು ಸಾಧಿಸುತ್ತದೆ. ಅದರಿಂದ ಶಾಂತಿಯುತ ಮತ್ತು ಆರೋಗ್ಯಕರ ಜೀವನವನ್ನು ಸಾಧಿಸಬಹುದು; ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕವಾಗಿ ಉನ್ನತ ಸಂಸ್ಕಾರವನ್ನು ಪಡೆಯಬಹುದು.

No comments:
Post a Comment