WELCOME TO S.S.B.A.U.P.S.AILA BLOG



ABOUT US

          
                           
       ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ್ಕಳಿಗೆ ಹತ್ತಿರ ಎಲ್ಲೂ ಶಾಲೆಗಳಿರಲಿಲ್ಲ. ದೂರದ ಮಂಗಲಪಾಡಿ ಶಾಲೆಗೋ  ಮುಳಿಂಜಶಾಲೆಗೋ ಹೋಗಬೇಕಿತ್ತು . ಆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಪ್ರೋತ್ಸಾಹ ದೊರಕುತ್ತಿರಲಿಲ್ಲ .
     
           ಹೀಗಾಗಿ ಆ ಕಾಲದಲ್ಲಿ ನಮ್ಮ ಸಮಾಜದ ಯಾವುದೇ ವಿದ್ಯಾರ್ಥಿಗಳು ಅಷ್ಟು ದೂರ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ . ಆ ವೇಳೆಯಲ್ಲಿ ಊರಿನ ಅನೇಕ ವಿದ್ಯಭಿಮಾನಿಗಳು ಈ ಕೊರತೆಯನ್ನು ನಿವಾರಿಸಲು ಯತ್ನಿಸಿದರು .ನಮಗೆ ನಮ್ಮ ಊರಿನಲ್ಲಿ ,ನಮ್ಮದೇ ಆದ ಶಾಲೆಯಿದ್ದರೆ ನಮ್ಮ ಸಮಾಜದ ಬಡ ಮಕ್ಕಳಲ್ಲಿ ಹೆಚ್ಚಿನ ವಿದ್ಯಪ್ರಸಾರವಾಗಬಹುದೆಂದು ಐಲ ಬೋವಿ ಭಗವತಿ  ಭಂಡಾರದ  ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ  ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಕಾರ್ಯೋನ್ಮುಖರಾದರು.   . ಆ ವೇಳೆ ನಮ್ಮ ಸಮಾಜದ ಜ್ಞಾನವೃಧ್ಧರೂ ವಯೋವೃದ್ಧರೂ ಆಗಿದ್ದ ಕಡಪ್ಪುರ ಸುಬ್ಬನವರು ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಸಣ್ಣ ಕಟ್ಟಡದಲ್ಲಿ ಸಮಾಜದ ಮಕ್ಕಳಿಗೆ ಓದು ಬರಹವನ್ನು ಕಲಿಸುವ ಏರ್ಪಾಡು ಮಾಡಿ ತನ್ನ ಪುತ್ರರಾದ ಜೋಗಪ್ಪ ಮತ್ತು ಈಶ್ವರ ಯಾನೆ ಕೊಟ್ಯಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಿದರು. ಆದರೆ ಆ ಕಟ್ಟಡವು ಶಾಲೆಗೆ ಯೋಗ್ಯವಲ್ಲವೆಂದು ಮನಗಂಡು ನಮ್ಮ ಐಲ  ಬೋವಿ ಭಗವತಿ   ಭಂಡಾರದ ಸಭೆಯವರು ರೈಲ್ವೆ ಗೇಟ್ ಬಳಿ ಇರುವ ದಿ \ವಾಸುದೇವ ಮಯ್ಯರ ಸಣ್ಣ ಕಟ್ಟಡವನ್ನು ಶಾಲೆಗಾಗಿ ಬಾಡಿಗೆಗೆ ಪಡೆದುಕೊಂಡರು . ಶಾಲಾ ಪ್ರಾಯದ ಸಮಾಜದ ಮಕ್ಕಳನ್ನು ಹೊಸದಾಗಿ ಪ್ರಾರಂಭಿಸುವ ಶಾಲೆಗೆ ಕಳುಹಿಸಬೇಕೆಂದು ತೀರ್ಮಾನಿಸಿದರು . 

      ಹೀಗೆ ೦೬-೧೦-೧೯೨೭ ರಂದು ಐಲ ಶ್ರೀ ಶಾರದ ಬೋವಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಪಡೆದು ೨೭ ಮಕ್ಕಳ ದಾಖಲಾತಿಯೊಂದಿಗೆ ಕಾರ್ಯೋನ್ಮುಖವಾಯಿತು . ಜೋಗಪ್ಪ ಮತ್ತು ಕೋಟ್ಯಪ್ಪ ನವರು ಕಾರಣಾ೦ತರದಿಂದ ಅಧ್ಯಾಪಕರಾಗಿ ಮುಂದುವರಿಯದ ಕಾರಣ ಕರ್ತಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಲಾಯಿತು . ನಮ್ಮ ಸಮಾಜದ ಏಕೈಕ ಸರಕಾರಿ ಅಧಿಕಾರಿಯಾಗಿದ್ದ ಅಮೀನ್ ವೀರಪ್ಪ ಮತ್ತು ಕರ್ತಪ್ಪ ಮಾಸ್ತರರ ಅವಿಶ್ರಾಂತ ಪ್ರಯತ್ನದ ಫಲವಾಗಿ ೧೯೩೦ ರ ಹೊತ್ತಿಗೆ ಶಾಲೆಗೆ ತಾತ್ಕಾಲಿಕ ಮಂಜೂರಾತಿ ದೊರೆಯಿತು     

       ಆ ಬಳಿಕ ೦೧-೦೭-೧೯೩೩ರಲ್ಲಿ ಮುಖ್ಯೋಪಾಧ್ಯಾಯರಾಗಿ ಬಂದ ಉಚ್ಚಿಲ್ ಪರಮೇಶ್ವರ ಮತ್ತು ಅಧ್ಯಾಪಕರಾದ ಬಂಗ್ಲೆ ಶ್ರೀಧರನವರ ಸತತ ಪ್ರಯತ್ನದ ಫಲವಾಗಿ ಕುಂಟಿತಗೊಂಡಿದ್ದ ಶಾಲೆಯು ಅಭಿವೃದ್ಧಿ  ಹೊಂದುತ್ತಾ ಹೋಯಿತು. ಮಕ್ಕಳ ಸಂಖ್ಯೆಯು ಹೆಚ್ಚಿತು. ಕಟ್ಟಡವು ವಿಸ್ತಾರಗೊಂಡಿತು. ಹೊಸ ಅಧ್ಯಾಪಕರ ನೇಮಕಾತಿಯೂ ಆಯಿತು. ಅವರ ನಂತರ ಎ. ಶ್ರೀಧರ , ಬಿ. ಅಂಬು , ಬಂಗ್ಲೆ ಪರಮೇಶ್ವರ , ಎಮ್. ಬಟ್ಯ ಎಂಬವರು ಮುಖ್ಯೋಪಾಧ್ಯಾಯರಾಗಿ ಶಾಲಾಭಿವೃಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದರು . ೧೯೫೬ರಲ್ಲಿ ಮುಖ್ಯೋಪಾಧ್ಯಾಯರಾಗಿ ಬಂದ ಎ . ದಾಮೋದರ ಅವರ ಅವಿಶ್ರಾಂತ ಶ್ರಮ ಮತ್ತು ಶಿಸ್ತು ಬದ್ಧ ಆಡಳಿತದಿಂದ ಶಾಲೆಯು ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವಂತಾಯಿತು      

         ೧೯೫೮ರಲ್ಲಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತಿಸಲ್ಪಟ್ಟಿತು . ಸುವರ್ಣ ಮಹೋತ್ಸವ , ವಜ್ರ ಮಹೋತ್ಸವ , ಅಮೃತ ಮಹೋತ್ಸವವನ್ನು ಆಚರಿಸಿದ ಶಾಲೆಯು ಶತಮಾನೋತ್ಸವದ ಕನಸನ್ನು ಕಾಣುತ್ತಾ ಸಹಸ್ರಾರು ವಿದ್ಯಾಸಂಪನ್ನರನ್ನು ಪ್ರಪಂಚಕ್ಕೆ ನೀಡುತ್ತಿದೆ . ಐಲ ಗುತ್ಯಮ್ಮ ಭಗವತಿ ಭಂಡಾರದ ಮಹಾಸಭೆಯು ಹತ್ತು ಮಂದಿಯ  ಸದಸ್ಯರನ್ನೊಳಗೊಂಡ ಶಾಲಾ ಆಡಳಿತ ಕಮಿಟಿಯು ಶಾಲಾ ಆಡಳಿತದ ಆಗು ಹೋಗುಗಳನ್ನು ಶಿಸ್ತು ಬದ್ಧವಾಗಿ, ಕ್ರಮಬದ್ಧವಾಗಿ ನಡೆಸುತ್ತಾ ಬರುತ್ತಿದೆ .
            .  

 ನಮ್ಮ ಶಾಲಾ ಮ್ಯಾನೇಜರ್ ಗಳು  
1. ದಿ .ಮೇಗಿನಮನೆ ಐತಪ್ಪ 
2. ದಿ. ಭಂಡ ಶಾಲೆ ಪರಮೇಶ್ವರ ಕಾರ್ನವರು 
3. ದಿ ಬಂಗ್ಲೆ ಜಾಮಾ ಬೆಲ್ಚಪ್ಪಾಡ 
4. ದಿ ಕನ್ನನ್ನ್ಹಿ ಹಿತ್ತಿಲು ಬೀರಪ್ಪ  
5. ದಿ . ಅಮಿನ್ ವೀರಪ್ಪ 
6. ದಿ. ಸಾಧು 
7. ದಿ. ಶ್ರೀಧರ್ ಮಾಸ್ಟರ್ 
8. ದಿ. ಸಂಜೀವ ಐಲ್ 
9. ದಿ. ಎ ಕಣ್ಣಪ್ಪ ಮಾಸ್ಟರ್ 
10. ದಿ. ನಾರಾಯಣ .ಪಿ .ಕುಂಬ್ಳೆ 
11. ದಿ. ಕೇಶವ . ಆರ್ . ಐಲ್ 
12. ದಿ. ವಿಟ್ಟಲ್ . ಐಲ್ 
13. ದಿ. ದಾಮೋದರ್ 
14. ದಿ. ಮೋಹನ್ . ಕೆ . ಐಲ್ 
15. ಶ್ರೀಮತಿ ಪ್ರೇಮಲತಾ . ಐಲ್ 
16. ಶ್ರೀ . ವಾಸುದೇವ್ . ಕೆ. ಐಲ್ 
17.









No comments:

Post a Comment