WELCOME TO S.S.B.A.U.P.S.AILA BLOG



Tuesday 7 June 2016

                      01-06-2016  ಶಾಲಾ ಪ್ರವೇಶೋತ್ಸವ

      
 ದಿನಾಂಕ  01-06-2016 ಹೊಸ ಶೈಕ್ಷಣಿಕ  ವರ್ಷದ ಪ್ರವೇಶೊತ್ಸವವು  ಶಾಲಾ  ಅಸೆಂಬ್ಲಿಯೊಂದಿಗೆ 10.00 ಗಂಟೆಗೆ ಸರಿಯಾಗಿ  ಪ್ರಾರಂಭವಾಯಿತು. ಶಾಲಾ ಮೆನೇಜರ್ ರವರಾದ ಶ್ರೀ ಮಾನ್  ವಾಸುದೇವ ಕೆ. ಐಲ್ ರವರು ಅಸೆಂಬ್ಲಿಯಲ್ಲಿ      ಉಪಸ್ಥಿತರಿದ್ದು  ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಬಳಿಕ  ನಾಸಿಕ್ ಬ್ಯಾಂಡ್ ನೊಂದಿಗೆ  ವಿಧ್ಯಾರ್ಥಿಗಳು,ರಕ್ಷಕರು, ಅಧ್ಯಾಪಕರು  ಮೆರವಣಿಗೆಯಲ್ಲಿ ಪಾಲ್ಗೊಂಡರು. ನವಾಗತ  ಮಕ್ಕಳು  ಬಲೂನ್ ಗಳನ್ನು  ಹಿಡಿದುಕೊಂಡು  ಮೆರವಣಿಗೆಯಲ್ಲಿ ಸೇರಿಕೊಂಡರು. 
     ಮೆರವಣಿಗೆಯು ಶಾಲೆಗೆ  ತಲುಪಿದಾಗ  ಎಲ್ಲರಿಗೂ ಶರಬತ್ ವಿತರಿಸಲಾಯಿತು. ಶರಬತ್ ತಯಾರಿಸಲು  ಹೆಚ್ಚಿನ  ರಕ್ಷಕರ ಸಹಕಾರವು ಲಭಿಸಿತು.ಪ್ರಾರ್ಥನೆಯ  ಬಳಿಕ ಸಭಾಕಾರ್ಯಕ್ರಮ  ಪ್ರಾರಂಭವಾಯಿತು. ಶಾಲಾಮೆನೇಜರ್  ಅಧ್ಯಕ್ಷತೆ  ವಹಿಸಿದರು. ಮುಖ್ಯೋಪಾಧ್ಯಯರುಹಿರಿಯ ಅಧ್ಯಾಪಿಕೆಯಾದ ನಳಿನಿ  ಟೀಚರ್ ರವರೂ  ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಶ್ರೀಮತಿ  ಪ್ರೇಮಲತ. ಐಲ್ ರವರು  ಸ್ವಾಗತ ಭಾಷಣವನ್ನು  ಮಾಡಿದರು. ಮುಖ್ಯೋಪಾದ್ಯಯರು, ಹಿರಿಯ ಅದ್ಯಾಪಿಕೆಯವರದ ನಳಿನಿ ಟೀಚರ್ ರವರು ಮಕ್ಕಳಿಗೆ ಹಿತವಚನವನ್ನು  ನೀಡಿದರು. ನವಾಗತ ಮಕ್ಕಳಿಗೆ  ಮೆನೇಜರ್ ರವರು ಪಾಠ  ಪುಸ್ತಕ  ವಿತರಿಸಿದರು
           ಅಧ್ಯಕ್ಷರ ಭಾಷಣದಲ್ಲಿ  ಮೆನೇಜರ್ ರವರು ಶಾಲಾ ಶಿಸ್ತಿನ  ಬಗ್ಗೆ  ಹೆಚ್ಚಿನ  ಮಾಹಿತಿಯನ್ನು  ಮಕ್ಕಳಿಗೆ  ನೀಡಿದರು. ಶ್ರೀಮತಿ  ಜಲಜಾಕ್ಷಿ , ಶುಭ ಹಾಗೂ ಶ್ರುತಿ ಟೀಚರ್ ರವರು  ಪ್ರವೇಶೋತ್ಸವ  ಗೀತೆಯನ್ನು  ಹಾಡಿದರು. ಶ್ರೀಮತಿ  ಸುಜಾತ ಟೀಚರ್ ರವರು ಧನ್ಯವಾದಗಳನ್ನು ಅರ್ಪಿಸಿದರು.   ಕಾರ್ಯಕ್ರಮವನ್ನು  ಎಸ್ . ಆರ್ . ಜಿ . ಕನ್ವೀನರ್  ರವರು  ನಿರೂಪಿಸಿದರು. ಎಲ್ಲರಿಗೂ   ಶೈಕ್ಷಣಿಕ  ವರ್ಷದಲ್ಲಿ  ನಿವ್ರತ್ತಿ  ಹೊಂದಲಿರುವ  ನಳಿನಿ ಟೀಚರ್ ,ಹರಿಣಿ  ಟೀಚರ್ ಹಾಗೂ ಪ್ರೇಮಲತ ಟೀಚರ್ ರವರವತಿಯಿಂದ ಲಡ್ಡು  ವಿತರಿಸಲಾಯಿತು. ನವಾಗತ ಮಕ್ಕಳನ್ನು ಅಭಿನಯಗೀತೆಯನ್ನು ಹಾಡಿಸಿ , ಪುಗ್ಗೆ  ಹೊಡೆಯುವ ಆಟವನ್ನು ಆಡಿಸಿದರು. ಬಳಿಕ ಎಲ್ಲಾ   ವಿಧ್ಯಾರ್ಥಿಗಳು ತಮ್ಮ  ತಮ್ಮ ತರಗತಿಗೆ  ತೆರಳುದರೊಂದಿಗೆ ಕಾರ್ಯಕ್ರಮವು  ಮುಕ್ತಾಯವಾಯಿತು. 12.45ಕ್ಕೆ ಮಕ್ಕಳನ್ನು ಶಾಲೆಯಿಂದ ಬಿಡಲಾಯಿತು.








No comments:

Post a Comment