ತಾರೀಕು
31-01-2015 ಶನಿವಾರದಂದು
ನಮ್ಮ ಶಾಲಾ ವಾರ್ಷಿಕೋತ್ಸವವು
ಬಹಳ ವಿಜೃಂಭಣೆ ಯಿಂದ ನಡೆಯಿತು
. ಶಾಲಾ ನಿವೃತ್ತ
ಹಿಂದಿ ಶಿಕ್ಷಕಿ ಭಾಗೀರಥಿ ಟೀಚರ್
ಶಾಲಾ ಧ್ವಜಾರೋಹಣ ವನ್ನು ಮಾಡಿದರು
. ಶಾಲಾ ಮೆನೇಜರ್
ವಾಸುದೇವ ಕೆ . ಐಲ್
ಮತ್ತು ಶಾಲಾ ಆಡಳಿತ ಕಮಿಟಿಯ
ಸದಸ್ಯರು , ಶಾಲಾ
ಪಿ . ಟಿ . ಎ
. ಮತ್ತು ಎಂ . ಪಿ
. ಟಿ . ಎ
ಅಧ್ಯಕ್ಷರು ಸಭಾ ಕಾರ್ಯಕ್ರಮದಲ್ಲಿ
ಪಾಲ್ಗೊಂಡರು . ವಾರ್ಷಿಕೋತ್ಸವದ
ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ
ವಿಜೇತರಾದವರಿಗೆ ಬಹುಮಾನಗಳನ್ನು
ವಿತರಿಸಲಾಯಿತು . ನಂತರ
ಮಕ್ಕಳಿಗಾಗಿ ಛದ್ಮ ವೇಷ ಸ್ಪರ್ಧೆಯನ್ನು
ಏರ್ಪಡಿಸಲಾಯಿತು .
ಎಲ್
. ಕೆ. ಜಿ
. ಯು . ಕೆ
. ಜಿ ಮತ್ತು ಅಂಗನವಾಡಿ
ಮಕ್ಕಳ ನೃತ್ಯದ ಮೂಲಕ ಎಲ್ಲರನ್ನೂ
ಮನರಂಜಿಸಿದರು . ಎಲ್ಲರಿಗೂ
ಮಧ್ಯಾಹ್ನ ಊಟದ ವ್ಯವಸ್ಥೆಯನ್ನು
ಮಾಡಲಾಗಿತ್ತು . ಸಂಜೆ
4 ರಿಂದ 6 ಗಂಟೆಯ
ವರೆಗೆ ವಿದ್ಯಾರ್ಥಿಗಳಿಂದ ವಿವಿಧ
ಕಾರ್ಯಕ್ರಮಗಳು ಜರಗಿತು .
ರಾತ್ರಿ 7. ೦೦
ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮವು
ಆರಂಭವಾಯಿತು . ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿಯಾದ
ನಂಧಿಕೇಶ ರವರು ಅಧ್ಯಕ್ಷ ಸ್ಥಾನವನ್ನು
ವಹಿಸಿದರು . ನವೀನ್
ಚಂದ್ರ ಐಲ್ ,ಏರಿಯ ಮೆನೇಜರ್
,ಮುತ್ತೂಟ್ ಫೈನಾನ್ಸ್
ಮಂಗಳೂರು ಮತ್ತು ಶ್ರೀ ರಭಿಲಾಶ್
(ಮೆನೇಜರ್ ,
ರೇಶನಿಂಗ್ ಹೋಲ್ ಸೇಲ್
ಫುಡ್ ಡಿಸ್ಟ್ರಿ ಬ್ಯುಟರ್ ,ಕಾಸರಗೋಡು
) ಮುಖ್ಯ ಅತಿಥಿಗಳಾಗಿ
ಭಾಗವಹಿಸಿದ್ದರು . 2014-15 ನೇ
ಅಧ್ಯಯನ ವರ್ಷದಲ್ಲಿ ನಿವೃತ್ತ
ರಾಗಲಿರುವ ಶ್ರೀಮತಿ ಶಶಿಕಲಾ
ಟೀಚರ್ ಮತ್ತು ಶ್ರೀಮತಿ ಲಕ್ಷ್ಮಿ
ಟೀಚರ್ ರವರನ್ನು ಶಾಲಾ ಅಧ್ಯಾಪಕರ
ಪರವಾಗಿ ಮತ್ತು ಮೆನೇಜ್ ಮೆಂಟ್
ಪರವಾಗಿ ಸನ್ಮಾನಿಸಲಾಯಿತು .
ಸಭಾ ಕಾರ್ಯಕ್ರಮದ
ನಂತರ ಮಕ್ಕಳ ನೃತ್ಯ ಕಾರ್ಯಕ್ರಮ
ಮುಂದುವರಿಯಿತು . 10.00. ಗಂಟೆಗೆ
ಸರಿಯಾಗಿ ಕಾರ್ಯಕ್ರಮ ಮುಕ್ತಾಯ
ಗೊಂಡಿತು.
No comments:
Post a Comment