WELCOME TO S.S.B.A.U.P.S.AILA BLOG



Thursday, 4 September 2014



ಶಿಕ್ಷಕರ ದಿನಾಚರಣೆ 



           ಪ್ರಾಚೀನ ಕಾಲದಿಂದ ಇವತ್ತಿನವರೆಗೂ ಗೌರವಯುತವಾಗಿ ಮುಂದುವರೆದು ಬಂದ  ಹುದ್ದೆ  ಎಂದರೆ ಬೋಧನಾ ಹುದ್ದೆ. ಕಾರಣ ಈ ಹುದ್ದೆಗೆ ಸಿಗುವ ಉದಾತ್ತ ಗೌರವ, ಸ್ವಯಂ ತೃಪ್ತಿ, ಸ್ವಯಂ ಏಳಿಗೆ ಹಾಗೂ ಶಿಸ್ತು ತನ್ನಷ್ಟಕ್ಕೆ ತಾನೇ ಬರುವ ಹುದ್ದೆಯಾಗಿದೆ. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಪೈಪೋಟಿ ನಿರಂತರವಾಗಿ ನಡೆಯುತ್ತಲೇ ಇದೆ. ಇಂತಹ ಸ್ಪರ್ಧೆಗಳಲ್ಲಿ ಶಾಲೆಗಳು ಉಳಿಯಬೇಕಾದರೆ ಹಾಗು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ  ದೊರಕಿಸುವಲ್ಲಿ ಅಲ್ಲಿ ಬೋಧಿಸುವ   ಶಿಕ್ಷಕ -  ಶಿಕ್ಷಕಿಯರ ಪಾತ್ರ ಅತೀ ಪ್ರಾಮುಖ್ಯವಾಗಿದೆ. 
          
         ಎಲ್ಲಾ ಶಿಕ್ಷಕರಿಗೂ ವಿಶ್ವ ಪ್ರಸಿದ್ದ ತತ್ವ ಶಾಸ್ತ್ರಜ್ಞರು, ಆದರ್ಶ ಶಿಕ್ಷಕರು, ಮಾನವತಾವಾದಿಗಳು ಹಾಗೂ ವಿದ್ಯಾರ್ಥಿ ಪ್ರೇಮಿಗಳೂ ಆದ ಡಾ। ಸರ್ವಪಲ್ಲಿ ರಾದಾಕೃಷ್ಣನ್ ರವರ ೧೨೭ನೇ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 

"ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದಿಸಿ, ಅದನ್ನು ಸಮಾಜಕ್ಕೆ ಒಂದು ಸೇವೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು" 

No comments:

Post a Comment